ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಹಂಸವಿಜೇತ ನಿರ್ದೇಶನದ​ , ಶ್ಯಾಮ್ ಮುಕುಂದ್ ನಾವಲೆ ನಿರ್ಮಾಣದ ೨೦೧೬ರ ಜೀವನಚರಿತ್ರೆ ಆಧಾರಿತ ಚಿತ್ರ. ಪ್ರಮುಖ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ , ಚಿತ್ರ ಇತರ ಪ್ರಮುಖ ಪಾತ್ರಗಳಲ್ಲಿ ಶ್ರುತಿ, ಶಶಿಕುಮಾರ್, ಅನು ಪ್ರಭಾಕರ್ ಮತ್ತು ಅಭಿಜಿತ್ ಅಭಿನಯಿಸಿದ್ದಾರೆ. ವಿದ್ವಾಂಸ ಹಾಗೂ ಅವರ ಸಾಮಾಜಿಕ ಸೇವೆಗಳಿಗೆ ಹೆಸರಾಗಿದ್ದ ಹಿಂದೂಸ್ತಾನಿ ಸಾಂಪ್ರದಾಯಿಕ ಸಂಗೀತಗಾರ ಪಂಡಿತ್ ಪುಟ್ಟರಾಜ ಗವಾಯಿಗಳು (೧೯೧೪-೨೦೧೦) ನೈಜ ಜೀವನದ ಆಧರಿಸಿದ ಚಿತ್ರ ಇದಾಗಿದೆ